ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಲೋಪಬಾರದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣವೇ ಯತಿ. ಕೆಲವು ಕವಿಗಳು ಯತಿಯ ಸ್ಥಾನವನ್ನು ಕೆಲವು ಸಂಕೇತಗಳೊಂದಿಗೆ ತಮ್ಮ ಕಾವ್ಯಗಳಲ್ಲಿ ಗುರುತಿಸಿದ್ದು ಕಂಡುಬರುತ್ತದೆ. ಕನ್ನಡ ಕಾವ್ಯಗಳಲ್ಲಿ ಯತಿಯ ಬಳಕೆ ಅತ್ಯಂತ ಕಡಿಮೆಯಾಗಿದ್ದು ಸಂಸ್ಕೃತ ಕಾವ್ಯಗಳಲ್ಲಿ ಬಹಳಷ್ಟು ಇರುವುದನ್ನು ಗಮನಿಸಬಹುದು.