ಭಾಮಿನೀ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಕುಮಾರವ್ಯಾಸನ ಗದುಗಿನ ಭಾರತವಿರುವುದು ಈ ಛಂದಸ್ಸಿನಲ್ಲಿಯೆ. ಭಾಮಿನೀ ಷಟ್ಪದಿಯ ಪದ್ಯವೊಂದರಲ್ಲಿ ಆರು ಸಾಲಿಗಳಿರುತ್ತವೆ. ಮೂರನೆಯ,ಆರನೆಯ ಸಾಲುಗಳಲ್ಲಿ ೭ ಮಾತ್ರೆಗಳ ಮೂರು ಗಣಗಳೂ ಹಾಗು ಕೊನೆಯಲ್ಲಿ ಒಂದು ಗುರು ಬರುತ್ತದೆ (ಲಘು ಬಂದರೂ ಗುರು ಎಂದುಕೊಳ್ಳಬೇಕು). ಮಿಕ್ಕ ಸಾಲುಗಳಲ್ಲಿ ೭ ಮಾತ್ರೆಗಳ ಎರಡು ಗಣಗಳಿರುತ್ತವೆ. ಮತ್ತೊಂದು ಪ್ರಮುಖ ನಿಯಮವೆಂದರೆ, ೭ ಮಾತ್ರೆಗಳ ಗಣಗಳು ಕಡ್ಡಾಯವಾಗಿ ೩+೪ ಮಾದರಿಯಲ್ಲಿರಬೇಕು. ಅಂದರೆ ೩ ಮಾತ್ರೆಯ ಗಣದ ನಂತರ ೪ ಮಾತ್ರೆಯ ಗಣವು ಬಂದು, ಒಟ್ಟು ೭ ಮಾತ್ರೆಗಳ ಗಣವಾಗಬೇಕು. ಪದ್ಯವು ಆದಿಪ್ರಾಸದಿಂದ ಕೂಡಿರುತ್ತದೆ. ಇದರಲ್ಲಿ 'U _' ಮತ್ತು 'U _ U', ಭಾಮಿನೀ ಷಟ್ಪದಿಯ ಯಾವ ಗಣದಲ್ಲಿಯೂ ಬರಕೂಡದು. ಉದಾಹರಣೆಯಾಗಿ ಗದುಗಿನ ಭಾರತದ ಈ ಪ್ರಸಿದ್ಧ ಪದ್ಯವನ್ನು ನೋಡಿ. ಉದಾಹರಣೆ: ವೇದ ಪುರುಷನ ಸುತನ ಸುತನ ಸ ಹೋದರನ ಹಮ್ಮಗನ ಮಗನ ತ ಳೋದರಿಯ ಮಾತುಳನ ಮಾವನ ನತುಳಭುಜಬಲದಿ ಕಾದು ಗೆಲಿದನನಣ್ಣನವ್ವೆಯ ನಾದಿನಿಯ ಜಠರದಲಿ ಜನಿಸಿದ ನಾದಿಮೂರುತಿ ಸಲಹೊ ಗದುಗಿನ ವೀರನಾರಯಣ ಈ ಪದ್ಯವನ್ನು ಗಣಗಳಾಗಿ ವಿಂಗಡಿಸಿದಾಗ ಹೀಗೆ ಕಾಣುವುದು: _U | U U U U| U U U|U U UU| ವೇದ| ಪುರುಷನ | ಸುತನ| ಸುತನ ಸ _ U | UU_ | U U U|U UUU| ಹೋದ|ರನ ಹೆ|ಮ್ಮಗನ| ಮಗನ ತ _ U | U U _ | U U U| _ U U |U U U|UUUU|_ ಳೋದ|ರಿಯ ಮಾ|ತುಳನ| ಮಾವನ|ನತುಳ|ಭುಜಬಲ|ದಿ _ U | UUUU| _U |_U U| ಕಾದು| ಗೆಲಿದನ|ನಣ್ಣ|ನವ್ವೆಯ _ U| U U U U|UUU| U U UU| ನಾದಿ|ನಿಯ ಜಠ|ರದಲಿ| ಜನಿಸಿದ _ U| _ U U| U U U| U U U U| _U | _U U| _ ನಾದಿ|ಮೂರುತಿ | ಸಲಹೊ| ಗದುಗಿನ | ವೀರ|ನಾರಯ|ಣ '|' ಸಂಜ್ಞೆ ಗಣ ವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣ ವಿಂಗಡನೆಯಾಗಿರುವುದನ್ನು ಗಮನಿಸಿ: ೩|೪|೩|೪ ೩|೪|೩|೪ ೩|೪|೩|೪|೩|೪|- ೩|೪|೩|೪ ೩|೪|೩|೪ ೩|೪|೩|೪|೩|೪|-