ಕುಸುಮ ಷಟ್ಪದಿ

ಕುಸುಮ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಗುರುಬಸವನ(೧೪೩೦) 'ಮನೋವಿಜಯ' ಕಾವ್ಯ ಕುಸುಮ ಷಟ್ಪದಿಯಲ್ಲಿದೆ.

ಕುಸುಮ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1, ೨, ೪, ೫ ನೆಯ ಸಾಲುಗಳು ಸಮನಾಗಿದ್ದು, ೫ ಮಾತ್ರೆಯ ಎರಡು ಗಣಗಳಿರುತ್ತವೆ. ೩ ಮತ್ತು ೬ ನೆಯ ಪಾದಗಳಲ್ಲಿ ೫ ಮಾತ್ರೆಯ ೩ ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ (ಲಘು ಬಂದರೂ ಗುರು ಎಂದುಕೊಳ್ಳಬೇಕು). ಇದರಲ್ಲಿ 'U _ U U' ಮತ್ತು 'U _ _', ಕುಸುಮ ಷಟ್ಪದಿಯ ಯಾವ ಗಣದಲ್ಲಿಯೂ ಬರಕೂಡದು.

ಉದಾಹರಣೆ:

ನಾಡುಮನ ಸಿಜನೊಲವಿ
ನಾಡು ವೆಡೆ ಸಂತತಂ
ಬೀಡು ರತಿ ಪತಿಗೆ ಸತತ ನಿಧಾನವು
ನೋಡಿದ ನಿಮಿಷ ಪತಿಗೆ
ಮಾಡುವುದು ವಿನಯವನು
ನಾಡಾದಿಯವರ್ಗೆ ಬಣ್ಣಿಸಲು ಮೊಗ್ಗೇ

ಇದರ ಛಂದಸ್ಸಿನ ಪ್ರಸ್ತಾರ:

_ U U U |U U U U U|
ನಾಡುಮನ |ಸಿಜನೊಲವಿ|
_ U U U |_ U _|
ನಾಡು ವೆಡೆ |ಸಂತತಂ |
_ U U U |UUUUU| U U_ U| _
ಬೀಡು ರತಿ |ಪತಿಗೆ ಸತ|ತ ನಿಧಾನ|ವು|
_ U U U |U U U UU|
ನೋಡಿದ ನಿ|ಮಿಷ ಪತಿಗೆ|
_ U U U | U U U U U|
ಮಾಡುವುದು |ವಿನಯವನು|
_ _U | U U U _ |UUU _ |_
ನಾಡಾದಿ|ಯವರ್ಗೆ ಬ|ಣ್ಣಿಸಲು ಮೊ|ಗ್ಗೇ

'|' ಸಂಜ್ಞೆಯು ಗಣ ವಿಭಾಗವನ್ನು ತೋರಿಸುತ್ತದೆ. 

ಪದ್ಯವು ಕೆಳಗಿನಂತೆ ಗಣ ವಿಂಗಡನೆಯಾಗಿರುವುದನ್ನು ಗಮನಿಸಿ:

೫|೫
೫|೫|೫|-
೫|೫
೫|೫
೫|೫|೫|-