ಮಂದಾನಿಲ ರಗಳೆ

ಉದಾಹರಣೆ:

UU_| _UU| UU_|_UU|
ಜಡೆಗಳ್| ಬೆಂಬಳಿ |ವಿಡಿದಾ|ಡುತ್ತಿರೆ|

UU_| UUUU| __|_UU|
ಮುಡಿಯೊಳ್| ಸುರನದಿ |ತುಳ್ಕಾ|ಡುತ್ತಿರೆ|

UU_| UUUU| __|_UU|
ಜಡೆಯೊಳ್| ಶಶಿಕಳೆ |ಯಲ್ಲಾ|ಡುತ್ತಿರೆ|

UU_| UU_| UU_|_UU|
ಕಡುಚೆ |ಲ್ವಳಕಂ |ಕುಣಿದಾ|ಡುತ್ತಿರೆ|

ಮೇಲಿನ ಮಂದಾನಿಲ ರಗಳೆಯ ಪದ್ಯದಲ್ಲಿ ಪ್ರತಿಯೊಂದು ಪಾದದಲ್ಲೂ ನಾಲ್ಕು ಮಾತ್ರೆಯ ನಾಲ್ಕು ಗಣಗಳಿವೆ. ಮೊದಲೆರಡು ಸಾಲುಗಳಲ್ಲಿ ‘ಡ್’ ಪ್ರಾಸಾಕ್ಷರವೂ, ಉಳಿದೆರಡು ಸಾಲುಗಳಲ್ಲಿ ‘ಖ್’ ಪ್ರಾಸಾಕ್ಷರವೂ ಇದೆ. ಅಂತ್ಯ ಪ್ರಾಸವೂ ಎರಡೆರಡು ಸಾಲುಗಳಲ್ಲಿ ಬೇರೆ ಬೇರೆ ಇದೆ. ಹೀಗೆ ನಾಲ್ಕು ಮಾತ್ರೆಯ ನಾಲ್ಕು ಗಣ ಪ್ರತಿ ಪಾದದಲ್ಲೂ ಬಂದು ಎರಡೆರಡು ಸಾಲುಗಳಿಗೆ ಪ್ರಾಸ ನಿಯಮವಿರುವ ಪದ್ಯ ಜಾತಿಗೆ ಮಂದಾನಿಲ ರಗಳೆಯೆನ್ನುವರು. ಅಂತ್ಯಪ್ರಾಸವೂ ಕೆಲವು ಕಡೆ ಇರುವುದುಂಟು.