ಅಕ್ಷರಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಅಕ್ಷರಗಣ. ಮೂರು ಮೂರು ಅಕ್ಷರಗಳಿಗೆ ಒಂದೊಂದರಂತೆ ಗಣ ವಿಂಗಡಣೆ ಮಾಡಲಾಗುವುದು. ಇಲ್ಲಿ ಮಾತ್ರೆಗಳು ಇಂತಿಷ್ಟೇ ಇರಬೇಕೆಂಬ ನಿಯಮವಿಲ್ಲ. ಪದ್ಯದ ಸಾಲುಗಳಲ್ಲಿರುವ ಎಲ್ಲ ಅಕ್ಷರಗಳೂ ಗಣಗಳಾಗಿ ವಿಂಗಡಿಸಲ್ಪಡಬೇಕೆಂಬ ನಿಯಮವಿಲ್ಲ. ಗಣ ವಿಂಗಡಣೆಯ ನಂತರ ಒಂದು ಅಥವಾ ಎರಡು ಅಕ್ಷರಗಳು ಶೇಷವಾಗಿ ಉಳಿಯಬಹುದು. ವೃತ್ತಗಳು(ಖ್ಯಾತಕರ್ಣಾಟಕಗಳು) ಅಕ್ಷರ ಗಣ ಆಧಾರಿತ ಛಂದಸ್ಸು. ಅಕ್ಷರ ಗಣಗಳಲ್ಲಿ ಒಟ್ಟು ಎಂಟು ವಿಧಗಳಿವೆ. 1. ಯಗಣ 2. ಮಗಣ 3. ತಗಣ 4. ರಗಣ 5. ಜಗಣ 6. ಭಗಣ 7. ನಗಣ 8. ಸಗಣ ಅಕ್ಷರ ಗಣಗಳನ್ನು ಒಂದು ಸೂತ್ರದಲ್ಲಿ ಹೇಳಬಹುದು. ಅವು ಹೀಗಿವೆ. ಸೂತ್ರ: ಯಮಾತಾರಾಜಭಾನಸಲಗಂಅಕ್ಷರ ಗಣದಲ್ಲಿ ಬರುವ ಎಂಟು ಗಣಗಳನ್ನು ಗುರುತಿಸಲು ಕೆಳಗಿನ ಪದ್ಯವು ಸಹಕಾರಿಯಾಗಿದೆ. ಗುರು ಲಘು ಮೂರಿರೆ ಮ - ನ - ಗಣ ಗುರು ಲಘು ಮೊದಲಲ್ಲಿ ಬರಲು ಭ - ಯ - ಗಣಮೆಂಬರ್ ಗುರು ಲಘು ನಡುವಿರೆ ಜ - ರ - ಗಣ ಗುರು ಲಘು ಕೊನೆಯಲ್ಲಿ ಬರಲು ಸ - ತ - ಗಣಮಕ್ಕುಂ