ಖ್ಯಾತಕರ್ಣಾಟಕ ವೃತ್ತಗಳು

ಕನ್ನಡ ಸಾಹಿತ್ಯದಲ್ಲಿ ಬಳಕೆಯಲ್ಲಿದ್ದ ಖ್ಯಾತಕರ್ಣಾಟಕ ವೃತ್ತಗಳು ಇವು:
1. ಉತ್ಪಲಮಾಲಾ
2. ಚಂಪಕಮಾಲಾ
3. ಶಾರ್ದೂಲವಿಕ್ರೀಡಿತ
4. ಮತ್ತೇಭವಿಕ್ರೀಡಿತ
5. ಸ್ರಗ್ಧರಾವೃತ್ತ
6. ಮಹಾಸ್ರಗ್ಧರಾವೃತ್ತ

ಆರು ವೃತ್ತಗಳನ್ನು ಸುಲಭವಾಗಿ ಗುರುತಿಸಲು ಇರುವ ಸ್ಥೂಲ ಸಾಧನ ಪದ್ಯ:

“ಗುರುವೊಂದಾದಿಯೊಳುತ್ಪಲಂ ಗುರು ಮೊದಲ್ ಮೂರಾಗೆ ಶಾರ್ದೂಲಮಾ |
ಗುರುನಾಲ್ಕಾಗಿರಲಂತು ಸ್ರಗ್ಧರೆ ಲಘುದ್ವಂದ್ವಂ ಗುರುದ್ವಂದ್ವಮಾ |
ಗಿರೆ ಮತ್ತೇಭ ಲಘುದ್ವಯ ತ್ರಿಗುರುವಿಂದಕ್ಕುಂ ಮಹಾಸ್ರಗ್ಧರಾ|
ಹರಿಣಾಕ್ಷೀ ಲಘುನಾಲ್ಕು ಚಂಪಕಮಿವಾರು ಖ್ಯಾತಕರ್ಣಾಟಕಂ”