ಛಂದಸ್ಸು

ಛಂದಸ್ಸು: ಪದ್ಯವನ್ನು ರಚಿಸುವ ಶಾಸ್ತ್ರ.

ಪದ್ಯ ರಚನೆಯ ನಿಯಮಗಳನ್ನು ವಿವರಿಸುವ ಶಾಸ್ಟ್ರವೇ ಛಂದಶ್ಯಾಸ್ಟ್ರ.
ಛಂದಶ್ಯಾಸ್ಟ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು.

"ಸುಮಾರು ಕ್ರಿ.ಶ. ೯೯೦ರಲ್ಲಿ ಇದ್ದ ಒಂದನೆಯ ನಾಗವರ್ಮ ಎಂಬವನು ಛಂದೋಂಬುಧಿ ಎಂಬ ಗ್ರಂಥದ ಮೂಲಕ ಈ ಶಾಸ್ತ್ರವನ್ನು ನೀಡಿದ್ದಾನೆ. ಹಳಗನ್ನಡದ ಮತ್ತು ನಡುಗನ್ನಡದ ಪದ್ಯಕಾವ್ಯಗಳು ಈ ಶಾಸ್ತ್ರವನ್ನು ಅನುಸರಿಸಿಯೇ ಬರೆಯಲ್ಪಟ್ಟವು."

ಛಂದಸ್ಸು ಕನ್ನಡ ಸಾಹಿತ್ಯ, ಸಂಸ್ಕೃತ ಸಾಹಿತ್ಯದ ಆರಂಭದ ದಿನಗಳಿಂದಲೂ ಬಳಕೆಯಲ್ಲಿದ್ದು, ಕಾಲಕ್ರಮದಲ್ಲಿ ಹಲವಾರು ಪರಿಷ್ಕರಣೆಗೊಳಪಟ್ಟಿದೆ. ಆಧುನಿಕ ಕನ್ನಡ ಕಾವ್ಯಗಳಲ್ಲಿ ಛಂದಸ್ಸು ಹೆಚ್ಚು ಬಳಕೆಯಾಗುತ್ತಿಲ್ಲ. ಆದರೆ ಕಾವ್ಯ ಪರಂಪರೆಯಲ್ಲಿ ಛಂದಸ್ಸಿಗೆ ವಿಶೇಷ ಮಹತ್ವವಿದೆ.

ಇಲ್ಲಿ ಕೊಟ್ಟಿರುವ ಮೂರು ಕಾರಣಗಳಿಂದಾಗಿ ಛಂದಸ್ಸಿಗೆ ಗುರುತರವಾದ ಮಹತ್ವವುಂಟು.
- ಹಿಂದಿನ ಕಾವ್ಯಗಳ ಲಕ್ಷಣ ತಿಳಿಯಲು
- ಛಂದಸ್ಸನ್ನು ಕಡೆಗಣಿಸಿದ್ದರ ಔಚಿತ್ಯದ ಬಗ್ಗೆ ಮರು ಚಿಂತಿಸಲು
- ಛಂದಸ್ಸಿನ ಹೊಸ ಬಗೆಯ ಪ್ರಯೋಗಗಳನ್ನು ಅರಿಯಲು

ಛಂದಶ್ಶಾಸ್ತ್ರವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.
1. ಪ್ರಾಸ
2. ಯತಿ
3. ಗಣ

ಆದುದರಿಂದ ಪದ್ಯವನ್ನು ರಚಿಸಲು ಬೇಕಾದ ನಿರ್ದಿಷ್ಟ ಪಾದ(ಸಾಲು)ಗಳ ಬಗ್ಗೆ ಮತ್ತು ಪ್ರತಿ ಪಾದದಲ್ಲಿ ಇರಬೇಕಾದ ಪ್ರಾಸ, ಯತಿ, ಗಣಗಳ ಬಗ್ಗೆ ತಿಳಿಸುವ ಶಾಸ್ತ್ರವೇ ಛಂದಸ್ಸು.